Wednesday, February 18, 2015

ಆರೋಪಪಟ್ಟಿ ಇಲ್ಲದ ಅಮಾನತಿಗೆ ಕಾಲಮಿತಿ



PRAJAVANI NEWS PAPER DT:18-02-2015
ಆರೋಪಪಟ್ಟಿ ಇಲ್ಲದ ಅಮಾನತಿಗೆ ಕಾಲಮಿತಿ
ನವದೆಹಲಿ (ಪಿಟಿಐ): ಆರೋಪಪಟ್ಟಿ ಸಲ್ಲಿಸದ ಹೊರತು ಸರ್ಕಾರಿ ನೌಕ­ರ­ರನ್ನು ಗರಿಷ್ಠ ಮೂರು ತಿಂಗಳ­ಗಿಂತ ಹೆಚ್ಚು ಕಾಲ ಅಮಾನತ್ತಿ­ನಲ್ಲಿ ಇಡು­ವಂತಿಲ್ಲ ಎಂದು ಸುಪ್ರೀಂ­ಕೋರ್ಟ್‌ ಸರ್ಕಾ­ರಕ್ಕೆ ತಾಕೀತು ಮಾಡಿದೆ.
ಸರ್ಕಾರಿ ನೌಕರರ ಅಮಾನತು ಅವ­ಧಿಯನ್ನು ವಿನಾಕಾರಣ ವಿಸ್ತರಿಸು­ವುದು ನಿಯಮಾವಳಿ­ಯಂತಾಗಿ­ಬಿಟ್ಟಿದೆ ಎಂದು ನ್ಯಾಯ­­ಮೂರ್ತಿ­ಗ­ಳಾದ ವಿಕ್ರಮ್‌­­ಜಿತ್ ಸೇನ್‌ ಮತ್ತು ಸಿ. ನಾಗ­ಪ್ಪನ್‌ ಅವರಿದ್ದ ಪೀಠ ಅಭಿಪ್ರಾ­ಯ­­ಪಟ್ಟಿತು. ಒಂದು ವೇಳೆ ನೌಕರರ ಮೇಲಿನ ಆರೋಪ ಸಾಬೀತಾಗ­ದಿದ್ದರೆ ಅಮಾ­ನತು ಅವಧಿಯಲ್ಲಿ ಅವರು ಅನು­­­ಭವಿಸಿರಬ­ಹು­ದಾದ ಅಪ­ಮಾನ, ನಿಂದನೆ, ಮಾನಸಿಕ ಕಿರುಕುಳ­, ಸಮಾ­ಜದ ತಿರ­ಸ್ಕಾರ ಹಾಗೂ ಇಲಾ­ಖೆಯ ಅಪ­ಹಾಸ್ಯ­ವನ್ನು ಗಣನೆಗೆ ತೆಗೆದು­ಕೊ­ಳ್ಳ­­ಬೇಕಾಗು­ತ್ತದೆ ಎಂದು ನ್ಯಾಯ­ಮೂರ್ತಿಗಳು ಹೇಳಿದರು.
ಕಾಶ್ಮೀರದಲ್ಲಿ ನಾಲ್ಕು ಎಕರೆ ಜಾಗ ಉಪಯೋಗಿಸಲು ತಪ್ಪಾಗಿ ನಿರಾಕ್ಷೇ­ಪಣಾ ಪತ್ರವನ್ನು ನೀಡಿದ ಆರೋಪದ ಮೇಲೆ 2011ರಲ್ಲಿ ಅಮಾನತು­ಗೊಂಡ ಸೇನಾಧಿಕಾರಿ ಅಜಯ್‌ ಕುಮಾರ್ ಚೌಧರಿ ಸಲ್ಲಿಸಿದ ಮೇಲ್ಮ­ನವಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ಹೊರಡಿಸಿತು.
ಈ ಆದೇಶದ ಆಧಾರದ ಮೇಲೆ ಸೇನಾಧಿಕಾರಿ ತಮ್ಮ ಅಮಾ­ನತು ಕ್ರಮವನ್ನು ಪ್ರಶ್ನಿಸ­ಬ­ಹುದು ಎಂದು ನ್ಯಾಯ­ಮೂರ್ತಿಗಳು ಹೇಳಿದರು.